ತಣ್ಣೀರುಬಾವಿಯ ಸರ್ಫ್ ಕ್ಲಬ್ನಲ್ಲಿಮೂರನೇಆವೃತ್ತಿಯ `ಡೆನ್ಡೆನ್ 2026' ಅಂತರಾಷ್ಟ್ರೀಯ ಮುಕ್ತಸಮುದ್ರ ಈಜು ಚಾಂಪಿಯನ್ಶಿಪ್ ಜ.26ರಂದು ಆಯೋಜಿಸಿದೆ.
ಮಂಗಳೂರಿನ ತಣ್ಣೀರುಬಾವಿ ಸರ್ಫ್ ಕ್ಲಬ್ನಲ್ಲಿಜನವರಿ 26ರಂದು ಡೆನ್ಡೆನ್ 2026 ಅಂತರಾಷ್ಟ್ರೀಯ ಮುಕ್ತಸಮುದ್ರ ಈಜು ಚಾಂಪಿಯನ್ಶಿಪ್ ನಡೆಯಲಿದೆ. ಈ ಸ್ಪರ್ಧೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಈಜುಪಟುಗಳನ್ನು ಮಂಗಳೂರಿಗೆ ಆಕರ್ಷಿಸುತ್ತಿದೆ. ಈ ಬಾರಿ 500 ಮೀಟರ್ ಮುಕ್ತಈಜು, 2 ಕಿ.ಮೀ., 4 ಕಿ.ಮೀ., 6 ಕಿ.ಮೀ. ಮತ್ತು8 ಕಿ.ಮೀ. ವಿಭಾಗಗಳಲ್ಲಿಸಮುದ್ರದಲ್ಲಿಸ್ಪರ್ಧೆಗಳು ನಡೆಯಲಿವೆ. ವರ್ಷದಿಂದ ವರ್ಷಕ್ಕೆ ಈ ಚಾಂಪಿಯನ್ಶಿಪ್ಗೆ ಹೆಚ್ಚಿನ ಸ್ಪಂದನೆ ದೊ ರೆಯುತ್ತಿದ್ದು, ಎರಡನೇ ಆವೃತ್ತಿಯಲ್ಲಿ200 ಈಜುಗಾರರು ಭಾಗವಹಿಸಿದ್ದರೆ, ಈ ಬಾರಿ ಸುಮಾರು 400 ಸ್ಪರ್ಧಿಗಳು ಪಾಲ್ಗೊ ಳ್ಳುವ ನಿರೀಕ್ಷೆಯಿದ
ಸ್ಪರ್ಧೆಯ ತಾಂತ್ರಿಕ ಸಮಿತಿಯನ್ನು ಒಲಿಂಪಿಯನ್ ಗಗನ್ ಉಲ್ಲಾಲ್ ಮಠ್ ಮುನ್ನಡೆಸಲಿದ್ದಾರೆ. ಗುಣಮಟ್ಟ ಮತ್ತುಕ್ರೀಡಾ ವಿಧಾನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಡೆನ್ಡೆನ್ ಈಜು ಭಾರತದ ಅತ್ಯಂತ ಬೇಡಿಕೆಯ ಮತ್ತುಅಧಿಕೃತ ತೆರೆದ ನೀರಿನ ಈಜು ಸವಾಲುಗಳಲ್ಲಿಒಂದಾಗಿ ಪರಿಗಣಿಸಲ್ಪಟ್ಟಿದ್ದು, ನುರಿತ ಈಜುಗಾರರು ಇದನ್ನು ದೇಶದ ಅತ್ಯಂತ ಕಠಿಣ ದೂರದ ಸಮುದ್ರ ಈಜುಗಳಲ್ಲಿಶ್ರೇಣೀಕರಿಸಿದ್ದಾರೆ.
ಈ ವರ್ಷದ ಶೀರ್ಷಿಕೆ ಪ್ರಾಯೋಜಕತ್ವವನ್ನು ಮುಕುಂದ್ ರಿಯಾಲ್ಟಿ ವಹಿಸಿಕೊಂಡಿದೆ. ಸಂಸ್ಥೆಯ ಉದ್ದೇಶ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸುವುದು, ಸಕ್ರಿಯ ಜೀವನಶೈಲಿಗೆ ಪ್ರೋತ್ಸಾಹ ನೀಡುವುದು ಮತ್ತುಮಂಗಳೂರಿನ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ತೋ ರಿಸುವುದು. ಮಂಗಳೂರು ವಿಶ್ವದರ್ಜೆಯ ಅನುಭವಗಳ ತಾಣವಾಗಿ ಗುರುತಿಸಬೇಕೆಂಬ ಆಶಯವನ್ನು ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಗುರುದತ್ತಶೆಣೈ ವ್ಯಕ್ತಪಡಿಸಿದ್ದಾರೆ
ಮುಕುಂದ್ ರಿಯಾಲ್ಟಿ ಮಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಬ್ರಾಂಡ್ ಆಗಿದ್ದು, ಆಧುನಿಕ ಜೀವನ ಅನುಭವಗಳನ್ನು ನಿರ್ಮಿಸುವತ್ತಗಮನಹರಿಸಿದೆ. ಡೆನ್ಡೆನ್ 2026ನ್ನು ಬೆಂಬಲಿಸುವ ಮೂಲಕ, ಸಂಸ್ಥೆಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವುದರ ಜೊತೆಗೆ ಮಂಗಳೂರಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾ ಕ್ಯಾಲೆಂಡರ್ನಲ್ಲಿಸ್ಥಾನವನ್ನು ಬಲಪಡಿಸಲು ಸಹಕಾರ ನೀಡುತ್ತಿದೆ.
ಮಂಗಳೂರು ಸರ್ಫ್ ಕ್ಲಬ್ ಭಾರತದ ಕರಾವಳಿ ಕ್ರೀಡಾಕ್ಷೇತ್ರದಲ್ಲಿಪ್ರಮುಖ ಸ್ಥಾನ ಪಡೆದಿದ್ದು, ಸರ್ಫಿಂಗ್, ತೆರೆದ ನೀರಿನ ಈಜು ಮತ್ತುಸಾಗರ ಸುರಕ್ಷತೆಯನ್ನು ಉತ್ತೇಜಿಸುವಲ್ಲಿಮಹತ್ವ ಪಡೆದಿದೆ. ಡೆನ್ಡೆನ್ ಸ್ವಿಮ್ ಕ್ಲಬ್ನ ಪ್ರಮುಖ ಸಮುದ್ರ ಈಜು ಚಾಂಪಿಯನ್ಶಿಪ್ ಈಗ ತನ್ನ ಮೂರನೇ ಆವೃತ್ತಿಯನ್ನು ಆಚರಿಸುತ್ತಿದೆ.

